ಜಯಮ್ಮ ಬಿ 
 	1915-98, ಕನ್ನಡ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ. ಮೂಕಿ ಚಿತ್ರಗಳ ಕಾಲದಿಂದ ಬಣ್ಣದ ಚಿತ್ರಗಳವರೆಗೆ ದೀರ್ಘಕಾಲ ಚಲನಚಿತ್ರ ಹಾಗೂ ರಂಗಭೂಮಿಯೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದ ಇವರು 1915ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಪೋಲೀಸ್ ಇನ್ಸ್‍ಪೆಕ್ಟರಾಗಿದ್ದ ಟಿ.ಎನ್. ಮಲ್ಲಪ್ಪನವರು, ತಾಯಿ ಕಮಲಮ್ಮ. ತಾಯಿಯ ಮನೆತನದವರೆಲ್ಲ ನಾಟಕ ಮತ್ತು ಸಂಗೀತದಲ್ಲಿ ಪರಿಶ್ರಮವಿದ್ದವರೇ. ಇವರ ದೊಡ್ಡಮ್ಮ ಬಿ.ಸುಂದರಮ್ಮ ಕೂಡ ಆ ಕಾಲದ ಪ್ರಸಿದ್ಧ ನಟಿ. ಈ ಸಂಪರ್ಕದಿಂದಾಗಿ ಜಯಮ್ಮನವರಿಗೆ ಬಾಲ್ಯದಿಂದಲೂ ನಾಟಕದಲ್ಲಿ ಆಸಕ್ತಿ ಬೆಳೆಯಿತು. ಇವರ ತಂದೆಗೆ ಮಗಳು ಓದಿ ವೈದ್ಯಳಾಗ ಬೇಕೆಂಬ ಆಸೆ. ಆದರೆ ತಂದೆಯ ಅನಿರೀಕ್ಷಿತ ನಿಧನದಿಂದ ಇವರ ಶಾಲಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವಿಲ್ಲವಾಯಿತು. ಒಂಬತ್ತನೆಯ ವಯಸ್ಸಿನಲ್ಲಿಯೇ ರಸಿಕ ಜನಾನಂದ ನಾಟಕ ಸಭೆಯವರ ಸೀತಾಕಲ್ಯಾಣ ನಾಟಕದಲ್ಲಿ ಸೀತೆಯಾಗಿ ಅಭಿನಯಿಸಿದರು. ಇದೇ ಇವರ ಪ್ರಥಮ ವೃತ್ತಿನಾಟಕ.

	ಹದಿಮೂರು ವರ್ಷದವರಾಗಿದ್ದಾಗ ಬಾಳ್ಳು ಬಸವೇಗೌಡರ ಕಂಪನಿಯಲ್ಲಿ ಉಪನಾಯಕಿಯ ಪಾತ್ರಗಳನ್ನು ವಹಿಸುತ್ತಿದ್ದರು. 1928ರಲ್ಲಿ ಗುಬ್ಬಿ ವೀರಣ್ಣನವರ ಶ್ರೀ ಚನ್ನಬಸವೇಶ್ವರಸ್ವಾಮಿ ನಾಟಕ ಸಭಾ ಸೇರಿದರು. ಅಲ್ಲಿ ರಾಜಭಕ್ತಿ, ಸದಾರಮೆ, ಕಬೀರದಾಸ, ದಶಾವತಾರ ಮತ್ತು ತೆಲುಗು ನಾಟಕ ಕುರುಕ್ಷೇತ್ರದಲ್ಲೂ ಪಾತ್ರವಹಿಸಿ ಕರ್ನಾಟಕ ಮತ್ತು ಆಂಧ್ರ ಈ ಎರಡು ಪ್ರದೇಶಗಳಲ್ಲೂ ಹೆಸರು ಪಡೆದರು. ಗುಬ್ಬಿ ವೀರಣ್ಣನವರ ಕರ್ನಾಟಕ ಕಾರ್ಪೊರೇಷನ್ ಸಂಸ್ಥೆಯ ಮೂಕಿ ಚಿತ್ರಗಳಲ್ಲಿ ನಾಯಕಿಯಾದರು. ಮುಂದೆ ವೀರಣ್ಣನವರೊಂದಿಗೆ ಇವರ ವಿವಾಹವಾಯಿತು.

	ಹಿಸ್ ಲವ್ ಅಫೇರ್ ಚಿತ್ರದಲ್ಲಿ ಹಾಲಿವುಡ್ಡಿನ ನಿರ್ದೇಶಕರ ಮುಂದೆ ಪ್ರಥಮವಾಗಿ ನಟಿಸಿ ಚಲನಚಿತ್ರರಂಗಕ್ಕೆ ಅಡಿಯಿಟ್ಟರು. ಇದಾದ ಅನಂತರ ವೈ.ವಿ.ರಾವ್ ನಿರ್ದೇಶಿಸಿದ ಜಾಂಬವತಿ ಚಿತ್ರದಲ್ಲಿ ಅಭಿನಯಿಸಿದರು.

	ಗುಬ್ಬಿ ಕಂಪನಿಯ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದುದರ ಜೊತೆಗೇ ಸದಾರಮೆ, ಸುಭದ್ರ, ಜೀವನ ನಾಟಕ, ಹೇಮರೆಡ್ಡಿ ಮಲ್ಲಮ್ಮ, ತ್ಯಾಗಯ್ಯ ಮುಂತಾದ ವಾಕ್ಚಿತ್ರಗಳಲ್ಲೂ ನಾಯಕಿಯ ಪಾತ್ರವಹಿಸಿ ಪ್ರಸಿದ್ಧರಾದರು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನ ಸ್ವರ್ಗಸೀಮಾ, ತಮಿಳಿನ ಭರ್ತೃಹರಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ತ್ರಿಭಾಷಾತಾರೆ ಎಂದು ಹೆಸರು ಪಡೆದರು. ಮುಕ್ತಿ, ಸಾP್ಷÁತ್ಕಾರ, ಗುಣಸಾಗರಿ, ರಾಜಾವಿಕ್ರಮ, ಪ್ರೇಮಮಯಿ, ಮಾವನ ಮಗಳು, ಅಣ್ಣತಂಗಿ ಇವು ಇವರು ಪಾತ್ರವಹಿಸಿದ ಕೆಲವು ಪ್ರಮುಖ ಚಿತ್ರಗಳು. 

	ಇವರಿಗೆ ಅಭಿನಯದಂತೆ ಸಂಗೀತದಲ್ಲೂ ಆಸಕ್ತಿಯಿತ್ತು. ಅನೇಕ ಸಂಗೀತ ಕbsÉೀರಿಗಳನ್ನೂ ಮಾಡಿ ಸಂಗೀತ ಸುಧಾ, ಸಂಗೀತಸರಸ್ವತಿ ಜಯಮ್ಮ, ಬಿ. 1915-98, ಕನ್ನಡ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ. ಮೂಕಿ ಚಿತ್ರಗಳ ಕಾಲದಿಂದ ಬಣ್ಣದ ಚಿತ್ರಗಳವರೆಗೆ ದೀರ್ಘಕಾಲ ಚಲನಚಿತ್ರ ಹಾಗೂ ರಂಗಭೂಮಿಯೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದ ಇವರು 1915ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಪೋಲೀಸ್ ಇನ್ಸ್‍ಪೆಕ್ಟರಾಗಿದ್ದ ಟಿ.ಎನ್. ಮಲ್ಲಪ್ಪನವರು, ತಾಯಿ ಕಮಲಮ್ಮ. ತಾಯಿಯ ಮನೆತನದವರೆಲ್ಲ ನಾಟಕ ಮತ್ತು ಸಂಗೀತದಲ್ಲಿ ಪರಿಶ್ರಮವಿದ್ದವರೇ. ಇವರ ದೊಡ್ಡಮ್ಮ ಬಿ.ಸುಂದರಮ್ಮ ಕೂಡ ಆ ಕಾಲದ ಪ್ರಸಿದ್ಧ ನಟಿ. ಈ ಸಂಪರ್ಕದಿಂದಾಗಿ ಜಯಮ್ಮನವರಿಗೆ ಬಾಲ್ಯದಿಂದಲೂ ನಾಟಕದಲ್ಲಿ ಆಸಕ್ತಿ ಬೆಳೆಯಿತು. ಇವರ ತಂದೆಗೆ ಮಗಳು ಓದಿ ವೈದ್ಯಳಾಗಬೇಕೆಂಬ ಆಸೆ. ಆದರೆ ತಂದೆಯ ಅನಿರೀಕ್ಷಿತ ನಿಧನದಿಂದ ಇವರ ಶಾಲಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವಿಲ್ಲವಾಯಿತು. ಒಂಬತ್ತನೆಯ ವಯಸ್ಸಿನಲ್ಲಿಯೇ ರಸಿಕ ಜನಾನಂದ ನಾಟಕ ಸಭೆಯವರ ಸೀತಾಕಲ್ಯಾಣ ನಾಟಕದಲ್ಲಿ ಸೀತೆಯಾಗಿ ಅಭಿನಯಿಸಿದರು. ಇದೇ ಇವರ ಪ್ರಥಮ ವೃತ್ತಿನಾಟಕ.

	ಹದಿಮೂರು ವರ್ಷದವರಾಗಿದ್ದಾಗ ಬಾಳ್ಳು ಬಸವೇಗೌಡರ ಕಂಪನಿಯಲ್ಲಿ ಉಪನಾಯಕಿಯ ಪಾತ್ರಗಳನ್ನು ವಹಿಸುತ್ತಿದ್ದರು. 1928ರಲ್ಲಿ ಗುಬ್ಬಿ ವೀರಣ್ಣನವರ ಶ್ರೀ ಚನ್ನಬಸವೇಶ್ವರಸ್ವಾಮಿ ನಾಟಕ ಸಭಾ ಸೇರಿದರು. ಅಲ್ಲಿ ರಾಜಭಕ್ತಿ, ಸದಾರಮೆ, ಕಬೀರದಾಸ, ದಶಾವತಾರ ಮತ್ತು ತೆಲುಗು ನಾಟಕ ಕುರುಕ್ಷೇತ್ರದಲ್ಲೂ ಪಾತ್ರವಹಿಸಿ ಕರ್ನಾಟಕ ಮತ್ತು ಆಂಧ್ರ ಈ ಎರಡು ಪ್ರದೇಶಗಳಲ್ಲೂ ಹೆಸರು ಪಡೆದರು. ಗುಬ್ಬಿ ವೀರಣ್ಣನವರ ಕರ್ನಾಟಕ ಕಾರ್ಪೊರೇಷನ್ ಸಂಸ್ಥೆಯ ಮೂಕಿ ಚಿತ್ರಗಳಲ್ಲಿ ನಾಯಕಿಯಾದರು. ಮುಂದೆ ವೀರಣ್ಣನವರೊಂದಿಗೆ ಇವರ ವಿವಾಹವಾಯಿತು.

	ಹಿಸ್ ಲವ್ ಅಫೇರ್ ಚಿತ್ರದಲ್ಲಿ ಹಾಲಿವುಡ್ಡಿನ ನಿರ್ದೇಶಕರ ಮುಂದೆ ಪ್ರಥಮವಾಗಿ ನಟಿಸಿ ಚಲನಚಿತ್ರರಂಗಕ್ಕೆ ಅಡಿಯಿಟ್ಟರು. ಇದಾದ ಅನಂತರ ವೈ.ವಿ.ರಾವ್ ನಿರ್ದೇಶಿಸಿದ ಜಾಂಬವತಿ ಚಿತ್ರದಲ್ಲಿ ಅಭಿನಯಿಸಿದರು.

	ಗುಬ್ಬಿ ಕಂಪನಿಯ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದುದರ ಜೊತೆಗೇ ಸದಾರಮೆ, ಸುಭದ್ರ, ಜೀವನ ನಾಟಕ, ಹೇಮರೆಡ್ಡಿ ಮಲ್ಲಮ್ಮ, ತ್ಯಾಗಯ್ಯ ಮುಂತಾದ ವಾಕ್ಚಿತ್ರಗಳಲ್ಲೂ ನಾಯಕಿಯ ಪಾತ್ರವಹಿಸಿ ಪ್ರಸಿದ್ಧರಾದರು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನ ಸ್ವರ್ಗಸೀಮಾ, ತಮಿಳಿನ ಭರ್ತೃಹರಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ತ್ರಿಭಾಷಾತಾರೆ ಎಂದು ಹೆಸರು ಪಡೆದರು. ಮುಕ್ತಿ, ಸಾP್ಷÁತ್ಕಾರ, ಗುಣಸಾಗರಿ, ರಾಜಾವಿಕ್ರಮ, ಪ್ರೇಮಮಯಿ, ಮಾವನ ಮಗಳು, ಅಣ್ಣತಂಗಿ ಇವು ಇವರು ಪಾತ್ರವಹಿಸಿದ ಕೆಲವು ಪ್ರಮುಖ ಚಿತ್ರಗಳು. 

	ಇವರಿಗೆ ಅಭಿನಯದಂತೆ ಸಂಗೀತದಲ್ಲೂ ಆಸಕ್ತಿಯಿತ್ತು. ಅನೇಕ ಸಂಗೀತ ಕbsÉೀರಿಗಳನ್ನೂ ಮಾಡಿ ಸಂಗೀತ ಸುಧಾ, ಸಂಗೀತಸರಸ್ವತಿ ಮುಂತಾದ ಪ್ರಶಸ್ತಿಗಳನ್ನು ಪಡೆದರು. ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಬಹುಕಾಲ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದರು. ಅಶಕ್ತ ಕಲಾವಿದರ ಸಂಘದ ಆಡಳಿತ ವರ್ಗದಲ್ಲೂ ಇವರು ಸೇವೆ ಸಲ್ಲಿಸಿದ್ದರು. ಇವರ ಅಭಿನಯ ಕಲೆಗಾಗಿ ಕರ್ನಾಟಕ ರಾಜ್ಯಸರ್ಕಾರ ಸನ್ಮಾನಿಸಿತ್ತು.       		 (ಎಚ್.ಎಸ್.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ